ಪ್ರಜಾಸೇವೆ ಅಭಿಯಾನ – - ಆರಂಭ: 5 ಸೆಪ್ಟೆಂಬರ್ 2026 - ರಾಜ್ಯ: ಕರ್ನಾಟಕ - ಮುಖ್ಯ… — 🎯TARGET PSI & KAS🎯 — TG.ME

ಪ್ರಜಾಸೇವೆ ಅಭಿಯಾನ –
- ಆರಂಭ: 5 ಸೆಪ್ಟೆಂಬರ್ 2026
- ರಾಜ್ಯ: ಕರ್ನಾಟಕ
- ಮುಖ್ಯ ಉದ್ದೇಶ: ಜನರ ಸಮಸ್ಯೆಗಳನ್ನು ಮನೆಬಾಗಿಲಲ್ಲೇ ಪರಿಹರಿಸಿ ಆಡಳಿತವನ್ನು ಜನಸ್ನೇಹಿಯಾಗಿಸುವುದು.
- ಸಭೆಗಳು: ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶನಿವಾರ ಜಿಲ್ಲೆ, ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ನಡೆಯುತ್ತವೆ.
- ಭಾಗವಹಿಸುವವರು: ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು.
- ಪರಿಹರಿಸುವ ಸಮಸ್ಯೆಗಳು: ಪಿಂಚಣಿ, ಭೂದಾಖಲೆ, ಖಾತೆ ಬದಲಾವಣೆ, ಪಂಚ ಗ್ಯಾರಂಟಿ, ಮನೆ–ನಿವೇಶನ ಮತ್ತು ಕಂದಾಯ ವ್ಯಾಜ್ಯಗಳು.
- ವಿಶೇಷ ಸೌಲಭ್ಯ: ಬಡವರು ಮತ್ತು ಶೋಷಿತರಿಗೆ ಕಂದಾಯ ನ್ಯಾಯಾಲಯದ ಪ್ರಕರಣಗಳಲ್ಲಿ ಉಚಿತ ಕಾನೂನು ನೆರವು.
- ದೂರು ಸಲ್ಲಿಕೆ: ನೇರ ಸಭೆ, 1902 ಸಹಾಯವಾಣಿ ಅಥವಾ IPGRS ಪೋರ್ಟಲ್ ಮೂಲಕ.
- ತಂತ್ರಜ್ಞಾನ: ಕೃತಕ ಬುದ್ಧಿಮತ್ತೆ ಆಧಾರಿತ ಮೂರು ಹಂತದ ದೂರು ನಿವಾರಣಾ ವ್ಯವಸ್ಥೆ.
- ಮುಖ್ಯ ಗುರಿ: ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ಸಾರ್ವಜನಿಕರ ಅಹವಾಲುಗಳಿಗೆ ಕಾಲಮಿತಿಯಲ್ಲಿ ಪರಿಹಾರ ನೀಡುವುದು.
❤3
September 8, 2026 1K