ಸಕ್ಕರೆ ಇತಿಹಾಸ ಮತ್ತು ಭಾರತದ ಪಾತ್ರ
ಮೊದಲ ಉತ್ಪಾದನೆ: ಜಗತ್ತಿನಲ್ಲೇ ಪ್ರಪ್ರಥಮವಾಗಿ ಸಕ್ಕರೆಯನ್ನು ತಯಾರಿಸಿದ್ದು ಭಾರತದಲ್ಲಿ. ಸರಿಸುಮಾರು ಕ್ರಿ.ಪೂ. 500-350 ರ ಅವಧಿಯಲ್ಲಿ ಭಾರತದಲ್ಲಿ ಕಬ್ಬಿನ ರಸದಿಂದ ಹರಳು ರೂಪದ ಸಕ್ಕರೆ ತಯಾರಿಸುವ ವಿಧಾನ ಅಸ್ತಿತ್ವಕ್ಕೆ ಬಂದಿತು.
ಭಾಷಾ ಮೂಲ: ಸಕ್ಕರೆಗೆ ಸಂಬಂಧಿಸಿದ ಪದಗಳು ಸಂಸ್ಕೃತ ಭಾಷೆಯಿಂದ ಹುಟ್ಟಿಕೊಂಡಿವೆ. ಉದಾಹರಣೆಗೆ: 'ಶರ್ಕರಾ' (Sarkara) ಎಂಬ ಸಂಸ್ಕೃತ ಪದದಿಂದಲೇ ಇಂಗ್ಲಿಷ್‌ನ 'Sugar', ಅರೇಬಿಕ್‌ನ 'ಸುಕ್ಕರ್' ಎಂಬ ಪದಗಳು ಬಂದಿವೆ. ಖಂಡ ಸಕ್ಕರೆಗೆ ಬಳಸುವ 'ಖಂಡ' ಎಂಬ ಪದದಿಂದ ಇಂಗ್ಲಿಷ್‌ನ 'Candy' ಪದ ಬಂದಿದೆ
ಜಾಗತಿಕ ಪ್ರಸರಣ: ಭಾರತದಿಂದ ಈ ಸಕ್ಕರೆ ತಂತ್ರಜ್ಞಾನವು ಪರ್ಷಿಯಾ, ಚೀನಾ, ಅರಬ್ ದೇಶಗಳು ಮತ್ತು ಯುರೋಪ್‌ಗೆ ಹರಡಿತು. ಆರಂಭದಲ್ಲಿ ಚೀನಾವನ್ನು ಕಬ್ಬಿನ ತಂತ್ರಜ್ಞಾನದ ಪ್ರಮುಖ ಕೇಂದ್ರವೆಂದು ಕರೆಯಲಾಗುತ್ತಿತ್ತು.
1.ಕೃಷಿ ಆಧಾರಿತ ಉದ್ಯಮ: ಭಾರತದಲ್ಲಿ ಹತ್ತಿ (Cotton) ಉದ್ಯಮದ ನಂತರ ಸಕ್ಕರೆ ಉದ್ಯಮವು ಎರಡನೇ ಅತಿ ದೊಡ್ಡ ಕೃಷಿ ಆಧಾರಿತ ಉದ್ಯಮವಾಗಿದೆ.
2.ಜಗತ್ತಿನಲ್ಲಿ ಕಬ್ಬು ಮತ್ತು ಸಕ್ಕರೆ ಉತ್ಪಾದನೆಯಲ್ಲಿ ಬ್ರೆಜಿಲ್ ಪ್ರಥಮ ಸ್ಥಾನದಲ್ಲಿದ್ದರೆ, ಭಾರತ ದ್ವಿತೀಯ ಸ್ಥಾನದಲ್ಲಿದೆ (ಕೆಲವು ವರ್ಷಗಳಲ್ಲಿ ಭಾರತವು ಜಾಗತಿಕವಾಗಿ ಅತಿ ಹೆಚ್ಚು ಸಕ್ಕರೆ ಉತ್ಪಾದಿಸುವ ದೇಶವಾಗಿಯೂ ಹೊರಹೊಮ್ಮುತ್ತದೆ).
3.ಭಾರತದಲ್ಲಿ ಅತಿ ಹೆಚ್ಚು ಕಬ್ಬು ಮತ್ತು ಸಕ್ಕರೆ ಉತ್ಪಾದಿಸುವ ರಾಜ್ಯ: ಉತ್ತರ ಪ್ರದೇಶ (UP). ಮಹಾರಾಷ್ಟ್ರ 2ನೇ ಸ್ಥಾನದಲ್ಲಿದೆ.
4.ಕರ್ನಾಟಕದ ಸ್ಥಾನ: ಕರ್ನಾಟಕವು ಭಾರತದಲ್ಲೇ ಕಬ್ಬು ಉತ್ಪಾದನೆಯಲ್ಲಿ 3ನೇ ಪ್ರಮುಖ ರಾಜ್ಯವಾಗಿದೆ.
5.ಕರ್ನಾಟಕದ ಮೊದಲ ಸಕ್ಕರೆ ಕಾರ್ಖಾನೆ: ಮೈಸೂರು ಶುಗರ್ ಕಂಪನಿ (MySugar), ಇದು 1933 ರಲ್ಲಿ ಮಂಡ್ಯದಲ್ಲಿ ಸ್ಥಾಪನೆಯಾಯಿತು. ಇದನ್ನು ಸ್ಥಾಪಿಸಿದವರು ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್ ಎಂ. ವಿಶ್ವೇಶ್ವರಯ್ಯನವರು.
6.ಮಂಡ್ಯ ಜಿಲ್ಲೆಯನ್ನು "ಸಕ್ಕರೆಯ ನಗರಿ" (Sugar City of Karnataka) ಎಂದು ಕರೆಯಲಾಗುತ್ತದೆ.
7.ಪ್ರಸ್ತುತ ಕರ್ನಾಟಕದಲ್ಲಿ ಬೆಳಗಾವಿ ಜಿಲ್ಲೆಯು ಅತಿ ಹೆಚ್ಚು ಸಕ್ಕರೆ ಕಾರ್ಖಾನೆಗಳನ್ನು ಹೊಂದಿದ್ದು, ಅತಿ ಹೆಚ್ಚು ಕಬ್ಬು ಉತ್ಪಾದಿಸುತ್ತದೆ.
8.ಮೊಲಾಸಸ್ (Molasses):
ಸಕ್ಕರೆ ತಯಾರಿಕೆಯಲ್ಲಿ ಸಿಗುವ ಜಿಡ್ಡು ದ್ರವವಾಗಿದ್ದು, ಇದನ್ನು ಆಲ್ಕೋಹಾಲ್ ಮತ್ತು ಎಥೆನಾಲ್ (Ethanol) ತಯಾರಿಕೆಗೆ ಬಳಸಲಾಗುತ್ತದೆ.
9.ಬಗಾಸ್ (Bagasse):
ಕಬ್ಬಿನ ಜರಡಿ/ಸಿಪ್ಪೆಯಾಗಿದ್ದು, ಇದನ್ನು ಕಾಗದ ತಯಾರಿಕೆ ಹಾಗೂ ವಿದ್ಯುತ್ ಉತ್ಪಾದನೆಗೆ (Cogen) ಇಂಧನವಾಗಿ ಬಳಸಲಾಗುತ್ತದೆ.
September 5, 2026 596 2