ದೇಶದಲ್ಲೇ ಮೊದಲ ಬಾರಿಗೆ ಎಲ್‌ಎನ್‌ಜಿ (LNG - Liquefied Natural Gas) ಚಾಲಿತ… — 🎯TARGET PSI & KAS🎯 — TG.ME

❗️ದೇಶದಲ್ಲೇ ಮೊದಲ ಬಾರಿಗೆ ಎಲ್‌ಎನ್‌ಜಿ
(LNG - Liquefied Natural Gas)
ಚಾಲಿತ ರೈಲಿಗೆ ಗುಜರಾತ್‌ನ ಸಾಬರಮತಿಯಲ್ಲಿ ಚಾಲನೆ ನೀಡಲಾಗಿದೆ.

ಉದ್ಘಾಟನೆ: ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಅವರು ಗುಜರಾತ್‌ನ ಸಾಬರಮತಿಯಲ್ಲಿ ದೇಶದ ಮೊದಲ ಎಲ್‌ಎನ್‌ಜಿ ಚಾಲಿತ ರೈಲಿಗೆ ಹಸಿರುನಿಶಾನೆ ತೋರಿದ್ದಾರೆ.

ಭಾರತದ ಸಾಧನೆ: ಎಲ್‌ಎನ್‌ಜಿ ಚಾಲಿತ ರೈಲುಗಳನ್ನು ಓಡಿಸುವ ಜಗತ್ತಿನ ೬ನೇ (6ನೇ) ದೇಶವಾಗಿ ಭಾರತ ಹೊರಹೊಮ್ಮಿದೆ.

​ದ್ವಿ-ಇಂಧನ ಸಾಮರ್ಥ್ಯ (Dual-Fuel):
ಈ ರೈಲನ್ನು ಎಲ್‌ಎನ್‌ಜಿ ಇಂಧನದಿಂದ ಮಾತ್ರವಲ್ಲದೆ ಡೀಸೆಲ್‌ನಿಂದಲೂ ಓಡಿಸಬಹುದಾಗಿದೆ.

ಎಲ್‌ಎನ್‌ಜಿ (LNG) ತಂತ್ರಜ್ಞಾನ ಹೊಂದಿರುವ ವಿಶ್ವದ ಇತರ ೫ ದೇಶಗಳು: ಅಮೆರಿಕ, ರಷ್ಯಾ, ಎಸ್ಟೋನಿಯಾ, ಕಜಕಿಸ್ತಾನ್ ಮತ್ತು ಕೆನಡಾ.
September 28, 2026 495 3