❗️ಅಕ್ಕ (AKKA - Association of Kannada Kootas of America) ಸಮ್ಮೇಳನ.
ಅಮೆರಿಕದ ಫಿಲಡೆಲ್ಫಿಯಾದಲ್ಲಿ ಅಕ್ಕ (AKKA) ರಜತ ಮಹೋತ್ಸವ (25ನೇ ವರ್ಷದ ಸಂಭ್ರಮ) ಮತ್ತು ವಿಶ್ವ ಕನ್ನಡ ಸಮ್ಮೇಳನವನ್ನು ಆಯೋಜಿಸಲಾಗಿದೆ.
ಅಕ್ಕ (AKKA) ಎಂದರೇನು?:
ಅಕ್ಕ ಎಂದರೆ Association of Kannada Kootas of America. ಇದು ಉತ್ತರ ಅಮೆರಿಕದಲ್ಲಿ ವಾಸಿಸುತ್ತಿರುವ ಕನ್ನಡಿಗರನ್ನು ಮತ್ತು ಕನ್ನಡ ಸಂಘಗಳನ್ನು ಒಟ್ಟುಗೂಡಿಸುವ ಒಂದು ಲಾಭರಹಿತ ಸಾಂಸ್ಕೃತಿಕ ಒಕ್ಕೂಟವಾಗಿದೆ
ಮೊದಲ ವಿಶ್ವ ಕನ್ನಡ ಸಮ್ಮೇಳನ (1985): ಇದು 1985ರಲ್ಲಿ ಮೈಸೂರಿನಲ್ಲಿ ನಡೆಯಿತು.ಇದನ್ನು ರಾಷ್ಟ್ರಕವಿ ಕೆ. ವಿ. ಪುಟ್ಟಪ್ಪ (ಕುವೆಂಪು) ಅವರು ಉದ್ಘಾಟಿಸಿದರು.
ಎರಡನೇ ವಿಶ್ವ ಕನ್ನಡ ಸಮ್ಮೇಳನ (2011): ಇದು 2011ರಲ್ಲಿ ಬೆಳಗಾವಿಯಲ್ಲಿ ನಡೆಯಿತು. ಇದನ್ನು ಬಿ. ಎಸ್. ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಆಯೋಜಿಸಿತ್ತು ಹಾಗೂ ಸುಪ್ರಸಿದ್ಧ ಮಾಹಿತಿ ತಂತ್ರಜ್ಞಾನ ಉದ್ಯಮಿ ಎನ್. ಆರ್. ನಾರಾಯಣ ಮೂರ್ತಿ ಅವರು ಉದ್ಘಾಟಿಸಿದರು.

2
1September 6, 2026 279 3