ಜಿಲ್ಲಾ ನ್ಯಾಯಾಧೀಶರ ನಿವೃತ್ತಿ ವಯಸ್ಸು 62ಕ್ಕೆ
✧ ವಿಷಯ:
ಜಿಲ್ಲಾ ನ್ಯಾಯಾಧೀಶರ (District Judges) ನಿವೃತ್ತಿ ವಯಸ್ಸನ್ನು 60 ರಿಂದ 62 ವರ್ಷಕ್ಕೆ ಹೆಚ್ಚಿಸುವಂತೆ ಪರಿಶೀಲಿಸಲು ಸುಪ್ರೀಂ ಕೋರ್ಟ್ ಆದೇಶ.
✧ ಭಾರತದಲ್ಲಿ ವಿವಿಧ ನ್ಯಾಯಾಧೀಶರ ನಿವೃತ್ತಿ ವಯಸ್ಸು
- ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು: 65 ವರ್ಷಗಳು
- ಹೈಕೋರ್ಟ್ ನ್ಯಾಯಮೂರ್ತಿಗಳು: 62 ವರ್ಷಗಳು (ಇದನ್ನು 15ನೇ ಸಂವಿಧಾನ ತಿದ್ದುಪಡಿ ಕಾಯ್ದೆ, 1963 ರ ಮೂಲಕ 60 ರಿಂದ 62 ವರ್ಷಕ್ಕೆ ಹೆಚ್ಚಿಸಲಾಯಿತು).
- ಜಿಲ್ಲಾ/ಅಧೀನ ನ್ಯಾಯಾಲಯಗಳ ನ್ಯಾಯಾಧೀಶರು: ಪ್ರಸ್ತುತ ಸಾಮಾನ್ಯವಾಗಿ 60 ವರ್ಷಗಳು (ಇದನ್ನು 62ಕ್ಕೆ ಏರಿಸಲು ಈಗ ಚರ್ಚೆ ನಡೆಯುತ್ತಿದೆ).
ಸಂವಿಧಾನದ ಪ್ರಮುಖ ವಿಧಿಗಳು
ವಿಧಿ 124:
ಸುಪ್ರೀಂ ಕೋರ್ಟ್ ಸ್ಥಾಪನೆ ಮತ್ತು ರಚನೆ.
ವಿಧಿ 214: ರಾಜ್ಯಗಳಿಗೆ ಹೈಕೋರ್ಟ್
ವಿಧಿ 233: ಜಿಲ್ಲಾ ನ್ಯಾಯಾಧೀಶರ ನೇಮಕಾತಿ (ರಾಜ್ಯಪಾಲರು ಹೈಕೋರ್ಟ್‌ನೊಂದಿಗೆ ಸಮಾಲೋಚಿಸಿ ನೇಮಿಸುತ್ತಾರೆ).

1September 1, 2026 514 2