ನಮಸ್ಕಾರ
ಎಲ್ಲ ಸ್ನಾತಕ ಮಹಾವಿದ್ಯಾಲಯಗಳ ಪ್ರಾಂಶುಪಾಲರಿಗೆ ಈ ಮೂಲಕ ತಿಳಿಸುವುದೇನೆಂದರೆ,
ಸ್ನಾತಕ ಕೋರ್ಸ್ ಗಳ 1, 3, 5 ನೆಯ ಪ್ರವೇಶ ಪ್ರಕ್ರೀಯೆಗೆ ಸಂಬಂಧಿಸಿದಂತೆ,
2025-26 ನೇಯ ಸಾಲಿಗೆ ಪ್ರವೇಶ ಪಡೆದಕೊಳ್ಳದೆ ಇರುವ ವಿದ್ಯಾರ್ಥಿಗಳಿಗೆ ಕೊನೆಯ ಅವಕಾಶವಾಗಿ ದಿನಾಂಕ: 20-08-2025 ಮತ್ತು 21-08-2025 ರಂದು ವಿದ್ಯಾರ್ಥಿಗಳು ನೇರವಾಗಿ ವಿಶ್ವವಿದ್ಯಾಲಯಕ್ಕೆ ಖುದ್ದಾಗಿ ಬಂದು ಪ್ರಾಚಾರ್ಯರ ಶಿಫಾರಸ್ಸು ಪತ್ರದೊಂದಿಗೆ ಪ್ರವೇಶ ಪಡೆದುಕೊಳ್ಳಲು ತಿಳಿಸಲಾಗಿದೆ. (ವಿಶ್ವವಿದ್ಯಾಲಯ ಶುಲ್ಕ & ದಂಡಶುಲ್ಕವನ್ನು ವಿಶ್ವವಿದ್ಯಾಲಯದಲ್ಲಿ ಭರಿಸುವುದು)
ಸೂಚನೆ: ಸದರಿ ದಿನಾಂಕದ ನಂತರ ಯಾವುದೇ ವಿದ್ಯಾರ್ಥಿಗಳನ್ನು ವಿಶ್ವವಿದ್ಯಾಲಯಕ್ಕೆ ಕಳುಹಿಸುವಂತಿಲ್ಲ. ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿಗಳು UUCMS ID & PASSWORD Create ಮಾಡಿ ಕಳುಹಿಸುವುದು. ಈಗಲೇ ವಿದ್ಯಾರ್ಥಿಗಳಿಗೆ Course Registration ಬಿಟ್ಟಿದ್ದು ಕೊನೆಯ ದಿನಾಂಕವನ್ನು ಕಾಯದೇ ಸದರಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು.
ಧನ್ಯವಾದಗಳು
ಕುಲಸಚಿವರು
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ.
