ಮಾನ್ಯ ಮುಖ್ಯಮಂತ್ರಿ ಅವರೇ ಭಾಷಾಭಿಮಾನ ಅಂದ್ರೆ ಸ್ವಲ್ಪ ಪಕ್ಕದ ರಾಜ್ಯವನ್ನು ನೋಡಿ ಕಲೀರಿ,ಅವರು ಹೈಕೋರ್ಟ್ ನ ಪ್ರಧಾನ ಭಾಷೆಯಾಗಿ ತಮ್ಮ ಮಾತೃಭಾಷೆ ಇರಬೇಕು ಎನ್ನುವ ಬೇಡಿಕೆ ಇಡುವ ನಿರ್ಣಯ ಮಂಡನೆ ಮಾಡುತ್ತಾ ಇದ್ದಾರೆ, ಆದರೆ ನೀವು ಗ್ರೂಪ್ C ಪರೀಕ್ಷೆಗಳ ಪಠ್ಯಕ್ರಮದಲ್ಲಿ ಈ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೂಡ ಕನ್ನಡಕ್ಕೆ ಹೆಚ್ಚಿನ ಆದ್ಯತೆ ಇರೋದನ್ನು ತೆಗೆದುಹಾಕಿ,ನಮ್ಮ ಮಾತೃಭಾಷೆ ಆಡಳಿತ ಭಾಷೆ ಕನ್ನಡಕ್ಕೆ ಕಡಿಮೆ ಸ್ಥಾನ ನೀಡಿದ್ದೀರಿ,ಇದೇನಾ ನಿಮ್ಮ ಕನ್ನಡ ಅಭಿಮಾನ. ನಿಮ್ಮ ಕನ್ನಡ ಭಾಷಾಭಿಮಾನ ಹೇಗೆ ಇದೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕನ್ನಡ 35 ಅಂಕಗಳು ಇಂಗ್ಲಿಷ್ 35 ಅಂಕಗಳು ಅಂದ್ರೆ ನಿಮ್ಮ ಪ್ರಕಾರ ಯಾವದೂ ನಮ್ಮ ಮಾತೃಭಾಷೆ,ಕನ್ನಡದಷ್ಟೇ ಶ್ರೇಷ್ಠವೇ ಇಂಗ್ಲಿಷ್ ಭಾಷೆ ಭಾಷೆಯ ಜ್ಞಾನ ಇರಲಿ ಅದು ಇವತ್ತಿನ ಸ್ಪರ್ಧಾತ್ಮಕ ಯುಗದಲ್ಲಿ ಮುಖ್ಯ ಆದ್ರೆ ಕನ್ನಡ ಸರಿಸಮಾನ ಬೇಡ ಕನ್ನಡಕ್ಕೆ ಹೆಚ್ಚಿನ ಆದ್ಯತೆ ಇರಲಿ,ಕನ್ನಡಕ್ಕೆ ಹೆಚ್ಚಿನ ಅಂಕಗಳು ನಿಗದಿ ಆಗಲಿ.
September 3, 2026 8K 2