ಇವತ್ತು ಒಂದು ಸಂತೋಷದ ವಿಷಯ ಹಂಚಿಕೊಳ್ಳಬೇಕು ನಿಮ್ಮ ಜೊತೆ,ನಾನು ಈ ಹಿಂದೆ ಅನೇಕ… — TARGET KAS GROUP PAVAN RAJPUT — TG.ME

ಇವತ್ತು ಒಂದು ಸಂತೋಷದ ವಿಷಯ ಹಂಚಿಕೊಳ್ಳಬೇಕು ನಿಮ್ಮ ಜೊತೆ,ನಾನು ಈ ಹಿಂದೆ ಅನೇಕ ಸಹಾಯ ಮಾಡಿದ್ರು ಯಾವ ಸಹಾಯ ಮಾಡಿದ್ದರ ಮಾಹಿತಿ ಹಂಚಿಕೊಳ್ಳುತ್ತಾ ಇರಲಿಲ್ಲ,ಯಾಕೆ ಅಂದ್ರೆ ನೋಡು ಇವನು ಸ್ವಲ್ಪ ಸಹಾಯ್ ಮಾಡಿ ಎಷ್ಟು ಬಿಲ್ಡಪ್ ತಗೊತ್ತಾನೆ ಅಂತ, ಆದ್ರೆ ಈಗ ಮತ್ತೆ ಅನಿಸಿತು ಸಮಾಜದಲ್ಲಿ ಕೆಲವರು ಹೇಗೆ ಇದ್ದರು ಒಂದು ಎಲ್ಲದಕ್ಕೂ ಮಾತಾಡುತ್ತಾರೆ,ಈಗ ನಮ್ಮ ಸಹಾಯ ಮಾಡಿದ್ದು ಹಂಚಿಕೊಂಡರೆ ಇನ್ನೂ ಅನೇಕ ಜನ ಇದನ್ನು ನೋಡಿ ಅವರಿಗೆ ಸಾಧ್ಯ ಆದಮಟ್ಟಿಗೆ ಅವರು ಸಹಾಯ ಮಾಡಲು ಮುಂದೆ ಬರುತ್ತಾರೆ ಎನ್ನುವ ಉದ್ದೇಶ ಇಂದ ಇವತ್ತು ಇದು ಸಹಾಯ ಮಾಡಿದ ಮಾಹಿತಿ ಹಂಚಿಕೊಳ್ಳುತ್ತಾ ಇರೋದು,

ಈ ವಿಡಿಯೋ ಅಲ್ಲಿ ಇರುವ ಸಹೋದರಿ ಬೀದರ್ ಜಿಲ್ಲೆ ಅವರು,ಹೆಸರು ಭಾಗ್ಯಲಕ್ಷ್ಮಿ ವೆಂಕಟೇಶ ಕೊರವ ಅಂತ ಇನ್ನೂ 4ನೇ ತರಗತಿ ತಂದೆ ಆಟೋ ಡ್ರೈವರ್ ಮಗಳಿಗೆ ಡಾಕ್ಟರ್ ಆಗುವ ಆಶೆ,ಅವರ ಕುಟುಂಬದ ಜೊತೆ ಮಾತಾಡಿ ಆ ಸಹೋದರಿ ಜೊತೆ ಮಾತಾಡಿ ಅವರ ಉತ್ತಮ ಭವಿಷ್ಯಕ್ಕೆ ಶುಭ ಹಾರೈಸಿ ನನ್ನಿಂದ ಆದ 5000 ಸಹಾಯ ಮಾಡಿದೆ,ಮುಂದೆ ಏನಾದ್ರೂ kas ಅಧಿಕಾರಿ ಆಗಬೇಕು ಅಂತ ಅನಿಸಿದರೆ kas ಗೆ ಮಾರ್ಗದರ್ಶನ ಮಾಡುವ ಭರವಸೆ ನೀಡಿದೆ, ಈ ವಿಧ್ಯಾರ್ಥಿನಿ ವಿಳಾಸ ತಿಳಿದುಕೊಳ್ಳುವುದಕ್ಕೆ ನಮ್ಮ ಟಿಮ್ ತುಂಬಾ ಕೆಲಸ ಮಾಡಿದೆ ಕೇವಲ ವಿಡಿಯೋ ಅಲ್ಲಿ ಇರುವ ಉತ್ತರ ಬೀದರ್ ಅನ್ನೋದು ನೋಡಿ ಆ ಸಹೋದರಿ ಬಗ್ಗೆ ಎಲ್ಲಾ ಮಾಹಿತಿ ತಿಳಿದುಕೊಂಡು ನನಗೆ ತಿಳಿಸಿ ಇವತ್ತು ಈ ಸಹಾಯ ಮಾಡುವ ಹಾಗೆ ಸಾಧ್ಯ ಆಯ್ತು,ನಿಮ್ಮ ಎಲ್ಲರಿಗೂ ಧನ್ಯವಾದ.
👇👇👇👇👇
September 2, 2026 5.4K 5