❗️‘ಗ್ರಾಮಾನುಭವ’ (Gramanubhava)
ಯೋಜನೆಯ ಹೆಸರು: ‘ಗ್ರಾಮಾನುಭವ’ ಕಾರ್ಯಕ್ರಮ.
ಅರ್ಹ ವಿದ್ಯಾರ್ಥಿಗಳು:
ಜಿಲ್ಲಾ ಕೇಂದ್ರಗಳ ವ್ಯಾಪ್ತಿಯಲ್ಲಿರುವ ನಗರ ಪ್ರದೇಶದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ 8, 9 ಮತ್ತು 11 ನೇ ತರಗತಿಯ ವಿದ್ಯಾರ್ಥಿಗಳು.
ಪ್ರವಾಸದ ಸ್ವರೂಪ:
ವಿದ್ಯಾರ್ಥಿಗಳನ್ನು 1 ರಾತ್ರಿ ಸೇರಿದಂತೆ 2 ದಿನಗಳ ಕಾಲ ಹಳ್ಳಿಗಳಲ್ಲಿ ಉಳಿಸಿ, ಗ್ರಾಮೀಣ ಬದುಕಿನ ಅನುಭವ ನೀಡಲಾಗುತ್ತದೆ.
ಶಿಕ್ಷಣದ ಹಕ್ಕು ಕಾಯ್ದೆ (RTE Act):
2009 ರ ಕಾಯ್ದೆಯು 2010 ಏಪ್ರಿಲ್ 1 ರಿಂದ ಜಾರಿಗೆ ಬಂದಿತು (6 ರಿಂದ 14 ವರ್ಷದ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ).
ಸಂವಿಧಾನದ ಮೂಲಭೂತ ಹಕ್ಕು:
ಸಂವಿಧಾನದ ವಿಧಿ 21A (Article 21A) ಶಿಕ್ಷಣದ ಹಕ್ಕನ್ನು ಮೂಲಭೂತ ಹಕ್ಕನ್ನಾಗಿ ಮಾಡಿದೆ (86 ನೇ ಸಂವಿಧಾನ ತಿದ್ದುಪಡಿ, 2002).
ರಾಷ್ಟ್ರೀಯ ಶಿಕ್ಷಣ ನೀತಿ (NEP) ಅನುಷ್ಠಾನ:
ಪ್ರಾಯೋಗಿಕ ಮತ್ತು ಅನುಭವ ಆಧಾರಿತ ಕಲಿಕೆಗೆ (Experiential Learning) ಹೊಸ ಶಿಕ್ಷಣ ನೀತಿಯಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ

September 9, 2026 747 3