ಪ್ರಾಡಾ’ (Prada) ಕೊಲ್ಲಾಪುರಿ ಚಪ್ಪಲಿ ವಿವಾದ ಮತ್ತು ಸಹಯೋಗ: ಪ್ರಾಡಾ ಸಂಸ್ಥೆಯು… — 🎯TARGET PSI & KAS🎯 — TG.ME

❗️ ‘ಪ್ರಾಡಾ’ (Prada) ಕೊಲ್ಲಾಪುರಿ ಚಪ್ಪಲಿ ವಿವಾದ ಮತ್ತು ಸಹಯೋಗ: ಪ್ರಾಡಾ ಸಂಸ್ಥೆಯು ಕೊಲ್ಲಾಪುರಿ ಮಾದರಿಯ ಚಪ್ಪಲಿಗಳನ್ನು ತಯಾರಿಸಲು ಕರ್ನಾಟಕದ ಡಾ. ಬಾಬು ಜಗಜೀವನ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ (LIDKAR) ಮತ್ತು ಮಹಾರಾಷ್ಟ್ರದ LIDCOM ಸಂಸ್ಥೆಗಳೊಂದಿಗೆ ತರಬೇತಿ ಮತ್ತು ಮಾರುಕಟ್ಟೆ ಉತ್ತೇಜನಕ್ಕಾಗಿ ಒಪ್ಪಂದ ಮಾಡಿಕೊಳ್ಳುತ್ತಿದೆ. ಕೊಲ್ಲಾಪುರಿ ಚಪ್ಪಲಿಯ GI ಟ್ಯಾಗ್ (GI Status): 2019 ರಲ್ಲಿ ಕೊಲ್ಲಾಪುರಿ ಚಪ್ಪಲಿಗೆ ಜಂಟಿಯಾಗಿ 'ಭೌಗೋಳಿಕ ಸೂಚ್ಯಂಕ' (GI Tag) ನೀಡಲಾಯಿತು. GI ಹಕ್ಕು ಹೊಂದಿರುವ ರಾಜ್ಯಗಳು/ಜಿಲ್ಲೆಗಳು: ಕರ್ನಾಟಕ (4 ಜಿಲ್ಲೆಗಳು): ಬೆಳಗಾವಿ, ಬಾಗಲಕೋಟೆ, ಧಾರವಾಡ ಮತ್ತು ವಿಜಯಪುರ. ಮಹಾರಾಷ್ಟ್ರ (4 ಜಿಲ್ಲೆಗಳು): ಕೊಲ್ಲಾಪುರ, ಸಾಂಗ್ಲಿ, ಸತಾರಾ ಮತ್ತು ಸೋಲಾಪುರ GI ಕಾಯ್ದೆ: ಭಾರತದಲ್ಲಿ ಭೌಗೋಳಿಕ ಸೂಚ್ಯಂಕಗಳನ್ನು 'ಪದಾರ್ಥಗಳ ಭೌಗೋಳಿಕ ಸೂಚ್ಯಂಕ (ನೋಂದಣಿ ಮತ್ತು ರಕ್ಷಣೆ) ಕಾಯ್ದೆ, 1999' (Geographical Indications of Goods Act, 1999) ರ ಅಡಿಯಲ್ಲಿ ನೀಡಲಾಗುತ್ತದೆ. ಲಿಡ್ಕರ್ (LIDKAR): ಡಾ. ಬಾಬು ಜಗಜೀವನ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ (ಕರ್ನಾಟಕ ಸರ್ಕಾರದ ಸಂಸ್ಥೆ). GI ಟ್ಯಾಗ್ ಮಾನ್ಯತೆ ಅವಧಿ: ಭೌಗೋಳಿಕ ಸೂಚ್ಯಂಕ (GI Tag) ಪ್ರಮಾಣಪತ್ರವು 10 ವರ್ಷಗಳವರೆಗೆ ಮಾನ್ಯವಾಗಿರುತ್ತದೆ (ನಂತರ ನವೀಕರಿಸಿಕೊಳ್ಳಬೇಕು).

September 9, 2026 652 4