ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ (DFC - Dedicated Freight Corridor) ಉದ್ದೇಶ… — 🎯TARGET PSI & KAS🎯 — TG.ME

❗️ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ (DFC - Dedicated Freight Corridor) ಉದ್ದೇಶ: ದೇಶಾದ್ಯಂತ ಇರುವ ಪ್ರಮುಖ ಕೈಗಾರಿಕಾ, ಉತ್ಪಾದನಾ ಮತ್ತು ಲಾಜಿಸ್ಟಿಕ್ಸ್ ಕೇಂದ್ರಗಳ ನಡುವೆ ಹೆಚ್ಚಿನ ಸಾಮರ್ಥ್ಯದ, ಅತ್ಯಂತ ವೇಗದ ಹಾಗೂ ವಿಶ್ವಾಸಾರ್ಹ ರೈಲು ಸಂಪರ್ಕ ಕಲ್ಪಿಸುವುದು. ಮೂರನೇ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್: ಈ ವರ್ಷದ ಕೇಂದ್ರ ಬಜೆಟ್‌ನಲ್ಲಿ 3ನೇ ಕಾರಿಡಾರ್ ಅನ್ನು ಘೋಷಿಸಲಾಗಿದೆ. ಸಂಪರ್ಕಿಸುವ ರಾಜ್ಯಗಳು: ಇದು ಜಾರ್ಖಂಡ್, ಛತ್ತೀಸ್‌ಗಢ ಮತ್ತು ಮಹಾರಾಷ್ಟ್ರದ ಮೂಲಕ ಪಶ್ಚಿಮ ಬಂಗಾಳದ ದಂಕುನಿಯನ್ನು ಗುಜರಾತ್‌ನೊಂದಿಗೆ ಬೆಸೆಯಲಿದೆ. DFC ಎಂದರೇನು?: ಇದು ಕೇವಲ ಸರಕು ಸಾಗಣೆ ರೈಲುಗಳ (Goods Trains) ಸಂಚಾರಕ್ಕೆಂದೇಮೀಸಲಾದ ಪ್ರತ್ಯೇಕ ರೈಲ್ವೆ ಹಳಿಗಳ ಜಾಲವಾಗಿದೆ. ಇದರಿಂದ ಪ್ರಯಾಣಿಕರ ರೈಲುಗಳ ವಿಳಂಬ ತಪ್ಪುತ್ತದೆ ಮತ್ತು ಸರಕು ಸಾಗಣೆ ವೇಗವಾಗುತ್ತದೆ. ಆಡಳಿತ ಮಂಡಳಿ: ಇದನ್ನು ಭಾರತೀಯ ರೈಲ್ವೆ ಸಚಿವಾಲಯದ ಅಡಿಯಲ್ಲಿ ಬರುವ DFCCIL (Dedicated Freight Corridor Corporation of India Limited) ನಿರ್ವಹಿಸುತ್ತದೆ. ಇದರ ಪ್ರಧಾನ ಕಚೇರಿ ನವದೆಹಲಿಯಲ್ಲಿದೆ.

❤2
September 8, 2026 1.4K 10