ಕರ್ನಾಟಕ ಕಂದಾಯ ಇಲಾಖೆಯ ಪ್ರಮುಖ ಭೂ ನಮೂನೆಗಳು - ನಮೂನೆ–10: ನೋಂದಾಯಿತ ಭೂ… — 🎯TARGET PSI & KAS🎯 — TG.ME

ಕರ್ನಾಟಕ ಕಂದಾಯ ಇಲಾಖೆಯ ಪ್ರಮುಖ ಭೂ ನಮೂನೆಗಳು
- ನಮೂನೆ–10: ನೋಂದಾಯಿತ ಭೂ ವ್ಯವಹಾರದ ಮಾಹಿತಿಯನ್ನು ಉಪನೋಂದಣಾಧಿಕಾರಿಯಿಂದ ಕಂದಾಯ ಇಲಾಖೆಗೆ ಕಳುಹಿಸುವ ಮಾಹಿತಿ ಚೀಟಿ.
- ನಮೂನೆ–11E: ಜಮೀನಿನ ಭಾಗವನ್ನು ಮಾರಾಟ ಅಥವಾ ವಿಭಾಗ ಮಾಡುವಾಗ ಸಿದ್ಧಪಡಿಸುವ ಪೂರ್ವ ಮ್ಯುಟೇಷನ್ ನಕ್ಷೆ.
- ನಮೂನೆ–12: ಮ್ಯುಟೇಷನ್ ರಿಜಿಸ್ಟರ್‌ನ ಉತಾರ—ಭೂಹಕ್ಕು ಅಥವಾ ಮಾಲೀಕತ್ವ ಬದಲಾವಣೆಯ ವಿವರ.
- ನಮೂನೆ–16: RTC/ಪಹಣಿ—ಹಕ್ಕುಗಳು, ಹಿಡುವಳಿ ಮತ್ತು ಬೆಳೆಗಳ ದಾಖಲೆ.
- ನಮೂನೆ–18: ವಾರಸುದಾರಿಕೆ ಅಥವಾ ಉತ್ತರಾಧಿಕಾರದಿಂದ ಬಂದ ಭೂಹಕ್ಕಿನ ವರದಿ.
- ನಮೂನೆ–19 ಮತ್ತು 20: ಖರೀದಿ, ದಾನ, ವಿಭಾಗ ಮುಂತಾದ ಇತರ ವಿಧಾನಗಳಿಂದ ಪಡೆದ ಭೂಹಕ್ಕಿನ ವರದಿ.ನಮೂನೆ–9: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೃಷಿಯೇತರ ಆಸ್ತಿಯ ಮಾಲೀಕತ್ವ ಮತ್ತು ತೆರಿಗೆ ಮೌಲ್ಯಮಾಪನ ವಿವರಗಳ ದಾಖಲೆ.
- ನಮೂನೆ–11: ಜಮೀನು ಮತ್ತು ಕಟ್ಟಡಗಳ ತೆರಿಗೆ ಬೇಡಿಕೆ, ವಸೂಲಿ ಮತ್ತು ಬಾಕಿ ವಿವರಗಳ ದಾಖಲೆ.
❤3
September 8, 2026 888 9