❗️ಸುದ್ದಿಯಲ್ಲಿ ಏಕಿದೆ?:
ಪೂರ್ವ ವಲಯದಲ್ಲಿ (Eastern Sector) ಅಂದರೆ ಅರುಣಾಚಲ ಪ್ರದೇಶದ LAC ಗಡಿಯಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಯ್ದುಕೊಳ್ಳಲು ಭಾರತ ಮತ್ತು ಚೀನಾ ಸೇನೆಗಳು ಮೊದಲ ಬಾರಿಗೆ ಕೋರ್ ಕಮಾಂಡರ್ (Corps Commander) ಮಟ್ಟದ ಮಿಲಿಟರಿ ಮಾತುಕತೆಯನ್ನು ನಡೆಸಿವೆ.
ವಿಶೇಷತೆ:
ಈ ಹಿಂದೆ ಇಂತಹ ಉನ್ನತ ಮಟ್ಟದ ಸೇನಾ ಮಾತುಕತೆಗಳು ಮುಖ್ಯವಾಗಿ ಲಡಾಖ್ ಕ್ಷೇತ್ರಕ್ಕೆ (Western Sector) ಮಾತ್ರ ಸೀಮಿತವಾಗಿದ್ದವು. ಆದರೆ ಈಗ ಇದನ್ನು ಪೂರ್ವ ವಲಯಕ್ಕೂ (ಅರುಣಾಚಲ ಪ್ರದೇಶ) ವಿಸ್ತರಿಸಲಾಗಿದೆ.
ಮ್ಯಾಕ್‌ಮಹಾನ್ ರೇಖೆ
(McMahon Line):
ಭಾರತ ಮತ್ತು ಚೀನಾ ನಡುವಿನ (ವಿಶೇಷವಾಗಿ ಅರುಣಾಚಲ ಪ್ರದೇಶದ ಭಾಗದಲ್ಲಿ) ಅಂತರರಾಷ್ಟ್ರೀಯ ಗಡಿ ರೇಖೆಯನ್ನು 'ಮ್ಯಾಕ್‌ಮಹಾನ್ ರೇಖೆ' ಎಂದು ಕರೆಯಲಾಗುತ್ತದೆ. ಇದನ್ನು 1914ರ ಶಿಮ್ಲಾ ಒಪ್ಪಂದದಲ್ಲಿ ಗುರುತಿಸಲಾಯಿತು
2September 7, 2026 990