🎯TARGET PSI & KAS🎯: post #117740 — TG.ME

ವೀಟೋ ಅಂದರೆ ಏನು

ಅರ್ಥ: ಸಂಸತ್ತು ಅಂಗೀಕರಿಸಿದ ವಿಧೇಯಕವನ್ನು (Bill) ತಡೆಯುವ ಅಥವಾ ವಿಳಂಬಗೊಳಿಸುವ ಅಧಿಕಾರವೇ ವೀಟೋ.
ಸಂವಿಧಾನದ ವಿಧಿ:
ಭಾರತದ ಸಂವಿಧಾನದ ವಿಧಿ 111 (Article 111) ರ ಅಡಿಯಲ್ಲಿ ರಾಷ್ಟ್ರಪತಿಯವರಿಗೆ ಈ ಅಧಿಕಾರ ನೀಡಲಾಗಿದೆ.
✯ ಸಂಸತ್ತಿನ ಎರಡೂ ಮನೆಗಳು ಅಂಗೀಕರಿಸಿದ ವಿಧೇಯಕವು ರಾಷ್ಟ್ರಪತಿಯವರ ಅಂಕಿತ ಬಿದ್ದ ಮೇಲೆಯೇ ಕಾಯ್ದೆಯಾಗುತ್ತದೆ. ವಿಧಿ 111 ರ ಪ್ರಕಾರ ರಾಷ್ಟ್ರಪತಿಗಳು ಮೂರು ಆಯ್ಕೆಗಳನ್ನು ಹೊಂದಿರುತ್ತಾರೆ.

- ವಿಧೇಯಕಕ್ಕೆ ಒಪ್ಪಿಗೆ ನೀಡುವುದು
- ವಿಧೇಯಕಕ್ಕೆ ಒಪ್ಪಿಗೆಯನ್ನು ತಡೆಗಿಡಿಯುವುದು
- ವಿಧೇಯಕವನ್ನು ಮರುಪರಿಶೀಲನೆಗಾಗಿ ಸಂಸತ್ತಿಗೆ ಹಿಂತಿರುಗಿಸುವುದು (ಹಣಕಾಸು ವಿಧೇಯಕವನ್ನು ಹೊರತುಪಡಿಸಿ).

❗️ಭಾರತದ ರಾಷ್ಟ್ರಪತಿಯವರ 3
ಪ್ರಮುಖ ವೀಟೋ ಪ್ರಕಾರಗಳು


1.ಕಡ್ಡಾಯ/ಪೂರ್ಣ ವೀಟೋ
(Absolute Veto)

ವಿವರ: ವಿಧೇಯಕಕ್ಕೆ ಒಪ್ಪಿಗೆ ನೀಡಲು ರಾಷ್ಟ್ರಪತಿಗಳು ಸಂಪೂರ್ಣವಾಗಿ ನಿರಾಕರಿಸುವುದು.ಇದರಿಂದ ವಿಧೇಯಕವು ಅಲ್ಲಿಗೆ ಕೊನೆಗೊಳ್ಳುತ್ತದೆ

ಯಾವಾಗ ಬಳಸಲಾಗುತ್ತದೆ?:
- ಖಾಸಗಿ ಸದಸ್ಯರ ವಿಧೇಯಕಗಳಾಗಿದ್ದಾಗ (Private Member's Bill)
- ಸಂಸತ್ತು ವಿಧೇಯಕವನ್ನು ಅಂಗೀಕರಿಸಿ, ರಾಷ್ಟ್ರಪತಿಗಳ ಅಂಕಿತಕ್ಕೂ ಮುನ್ನವೇ ಮಂತ್ರಿಮಂಡಲ ರಾಜೀನಾಮೆ ನೀಡಿ ಹೊಸ ಸರ್ಕಾರ ಬಂದಾಗ.
ಗಮನಿಸಿ: ಸಂವಿಧಾನ ತಿದ್ದುಪಡಿ ವಿಧೇಯಕಗಳಿಗೆ ಇದನ್ನು ಬಳಸುವಂತಿಲ್ಲ.

Continue