ಇಟಲಿಯ ಪ್ರಧಾನ ಮಂತ್ರಿ ಜಾರ್ಜಿಯಾ ಮೆಲೋನಿ (Giorgia Meloni) ಐತಿಹಾಸಿಕ ಸಾಧನೆ… — 🎯TARGET PSI & KAS🎯 — TG.ME

❗️ಇಟಲಿಯ ಪ್ರಧಾನ ಮಂತ್ರಿ ಜಾರ್ಜಿಯಾ ಮೆಲೋನಿ
(Giorgia Meloni)


ಐತಿಹಾಸಿಕ ಸಾಧನೆ:
ಜಾರ್ಜಿಯಾ ಮೆಲೋನಿ ಅವರು ಇಟಲಿಯ ಯುದ್ಧಾನಂತರದ (Postwar) ಇತಿಹಾಸದಲ್ಲಿ ಸತತವಾಗಿ ಸುದೀರ್ಘ ಅವಧಿಗೆ ಪ್ರಧಾನ ಮಂತ್ರಿಯಾಗಿ ಅಧಿಕಾರ ನಡೆಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇಟಲಿಯ ಮೊದಲ ಮಹಿಳಾ ಪ್ರಧಾನಿ: ಜಾರ್ಜಿಯಾ ಮೆಲೋನಿ ಅವರು ಇಟಲಿ ದೇಶದ ಇತಿಹಾಸದಲ್ಲೇ ಮೊದಲ ಮಹಿಳಾ ಪ್ರಧಾನ ಮಂತ್ರಿಯಾಗಿದ್ದಾರೆ (ಅಕ್ಟೋಬರ್ 2022 ರಲ್ಲಿ ಅಧಿಕಾರ ವಹಿಸಿಕೊಂಡರು.

ರಾಜಕೀಯ ಪಕ್ಷ: ಇವರು 'ಬ್ರದರ್ಸ್ ಆಫ್ ಇಟಲಿ' (Brothers of Italy) ಎಂಬ ರಾಜಕೀಯ ಪಕ್ಷದ ನಾಯಕರಾಗಿದ್ದಾರೆ.

ಭಾರತ-ಇಟಲಿ ಸಂಬಂಧ:

ಪ್ರಧಾನಿ ಮೋದಿ ಅವರು ಮೆಲೋನಿ ಅವರ ಸ್ನೇಹವು ಭಾರತ-ಇಟಲಿ ವಿಶೇಷ ಕಾರ್ಯತಂತ್ರದ ಪಾಲುದಾರಿಕೆಯನ್ನು (India-Italy Special Strategic Partnership) ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಶ್ಲಾಘಿಸಿದ್ದಾರೆ.
September 4, 2026 1.2K 1