02 SEPTEMBER 2026 | UPSC-KPSC KEA ಪರೀಕ್ಷಾ ಪ್ರಚಲಿತ ವಿದ್ಯಮಾನಗಳು.
1.‘ಒಂದು ರಾಷ್ಟ್ರ–ಒಂದು ಸಮಯ’ ಗುರಿಯತ್ತ ಕಾನೂನು ಮಾಪನಶಾಸ್ತ್ರ (ಭಾರತೀಯ ಪ್ರಮಾಣಿತ ಸಮಯ) ನಿಯಮಗಳು, 2026 ಅನ್ನು ಅಧಿಸೂಚಿಸಲಾಗಿದೆ.
ಈ ನಿಯಮಗಳಡಿ ಭಾರತೀಯ ಪ್ರಮಾಣಿತ ಸಮಯವೇ ಕಾನೂನು, ಆಡಳಿತ, ವಾಣಿಜ್ಯ ಮತ್ತು ಅಧಿಕೃತ ಕಾರ್ಯಗಳಿಗೆ ಸಾಮಾನ್ಯ ಹಾಗೂ ಪತ್ತೆಹಚ್ಚಬಹುದಾದ ಸಮಯದ ಉಲ್ಲೇಖವಾಗಲಿದೆ.ಈ ಸಮಯ ನಿಯಮಗಳು ಅಧಿಕೃತ ರಾಜಪತ್ರದಲ್ಲಿ ಪ್ರಕಟವಾದ 180 ದಿನಗಳ ನಂತರ ಜಾರಿಗೆ ಬರಲಿವೆ.
2.ನವದೆಹಲಿಯಲ್ಲಿ ‘ಹುಲಿ ಭೂದೃಶ್ಯಗಳು: ಸಂರಕ್ಷಣೆ, ಜೈವ ಆರ್ಥಿಕತೆ ಮತ್ತು ಪರಿಸರ ಪ್ರವಾಸೋದ್ಯಮ’ ವಿಷಯದ 2 ದಿನಗಳ ಅಂತರರಾಷ್ಟ್ರೀಯ ಕಾರ್ಯಾಗಾರ ಆರಂಭವಾಯಿತು.
ಈ ಕಾರ್ಯಾಗಾರವನ್ನು ಅಂತರರಾಷ್ಟ್ರೀಯ ದೊಡ್ಡ ಬೆಕ್ಕುಗಳ ಒಕ್ಕೂಟ, ಏಷ್ಯನ್ ಅಭಿವೃದ್ಧಿ ಬ್ಯಾಂಕ್ ಮತ್ತು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಸಂಯುಕ್ತವಾಗಿ ಆಯೋಜಿಸಿವೆ.
3.ಲೋಕಸಭಾಧ್ಯಕ್ಷ ಓಂ ಬಿರ್ಲಾ ಮತ್ತು ಸೆಶೆಲ್ಸ್ ರಾಷ್ಟ್ರೀಯ ವಿಧಾನಸಭೆಯ ಅಧ್ಯಕ್ಷೆ ಅಜರೆಲ್ ಯೋಲಾಂಡಾ ಎರ್ನೆಸ್ಟಾ ದ್ವಿಪಕ್ಷೀಯ ಸಂಸತ್ತೀಯ ಸಹಕಾರ ಕುರಿತು ಮಾತುಕತೆ ನಡೆಸಿದರು.
ಅಜರೆಲ್ ಯೋಲಾಂಡಾ ಎರ್ನೆಸ್ಟಾ ಅವರು ಸೆಶೆಲ್ಸ್ ರಾಷ್ಟ್ರೀಯ ವಿಧಾನಸಭೆಯ ಮೊದಲ ಮಹಿಳಾ ಅಧ್ಯಕ್ಷೆ
4.16ನೇ ಏರೋ ಇಂಡಿಯಾ ಪ್ರದರ್ಶನವನ್ನು 8–12 ಫೆಬ್ರವರಿ 2027ರವರೆಗೆ ಬೆಂಗಳೂರಿನ ಯಲಹಂಕ ವಾಯುಪಡೆ ನಿಲ್ದಾಣದಲ್ಲಿ ನಡೆಸಲಾಗುತ್ತದೆ.
ಏರೋ ಇಂಡಿಯಾವನ್ನು ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನಗಳಲ್ಲಿ ಒಂದಾಗಿ ಪರಿಗಣಿಸಲಾಗಿದ್ದು, ರಕ್ಷಣಾ ಸಚಿವಾಲಯದ ರಕ್ಷಣಾ ಉತ್ಪಾದನಾ ಇಲಾಖೆ ಆಯೋಜಿಸುತ್ತದೆ.
5.ಭಾರತೀಯ ನೌಕಾಪಡೆಯ ಪಟ ನೌಕೆ ಐಎನ್‌ಎಸ್ ಸುದರ್ಶಿನಿ ‘ಲೋಕಯಾನ 2026’ ಸಾಗರಯಾನದ ಭಾಗವಾಗಿ ಸ್ಪೇನ್‌ನ ಬಾರ್ಸಿಲೋನ ಬಂದರು ತಲುಪಿದೆ.
ಲೋಕಯಾನ 2026ವು ಭಾರತೀಯ ನೌಕಾಪಡೆಯ ಸಾಗರಯಾನ ತರಬೇತಿ ಮತ್ತು ಅಂತರರಾಷ್ಟ್ರೀಯ ನೌಕಾ ಸ್ನೇಹ ಸಂಬಂಧ ಬಲಪಡಿಸುವ ಅಭಿಯಾನವಾಗಿದೆ.
6.2024ರ ತೆನ್ಸಿಂಗ್ ನಾರ್ಗೆ ರಾಷ್ಟ್ರೀಯ ಸಾಹಸ ಪ್ರಶಸ್ತಿಗಳನ್ನು ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ಘೋಷಿಸಿದೆ.
ಬಲ್ಜೀತ್ ಕೌರ್ ಮತ್ತು ಸ್ಕಾಲ್ಜಾಂಗ್ ರಿಗ್ಜಿನ್ — ಭೂ ಸಾಹಸ ವಿಭಾಗ, ರಿಮೋ ಸಾಹಾ — ಜಲ ಸಾಹಸ ವಿಭಾಗ, ಶಿವ ಪ್ರಸಾದ್ ಚಮೋಲಿ — ಜೀವನ ಸಾಧನೆ ವಿಭಾಗದಲ್ಲಿ ಆಯ್ಕೆಯಾಗಿದ್ದಾರೆ.
7. ಭಾರತೀಯ ಸಂವಿಧಾನದ ಅನುಚ್ಛೇದ 317 ಪ್ರಮುಖವಾಗಿದ್ದು, ರಾಜ್ಯ ಲೋಕಸೇವಾ ಆಯೋಗದ ಅಧ್ಯಕ್ಷ ಅಥವಾ ಸದಸ್ಯರ ವಜಾ ಮತ್ತು ಅಮಾನತಿಗೆ ಸಂಬಂಧಿಸಿದೆ.
ರಾಷ್ಟ್ರಪತಿಗಳು 14 ಆಗಸ್ಟ್ 2026ರಂದು ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರ ವಿರುದ್ಧದ ಆರೋಪಗಳನ್ನು ಪರಿಶೀಲಿಸಲು ಅನುಚ್ಛೇದ 317(1)ರಡಿ ವಿಷಯವನ್ನು ಸುಪ್ರೀಂ ಕೋರ್ಟ್‌ಗೆ ಉಲ್ಲೇಖಿಸಿದ್ದಾರೆ.
8.ಡಿಜಿಟಲ್ ಇಂಡಿಯಾ ಭಾಷಿಣಿ ವಿಭಾಗ ಮತ್ತು ಕಠ್ಮಂಡು ವಿಶ್ವವಿದ್ಯಾಲಯವು ನೇಪಾಳಿ ಸೇರಿದಂತೆ ಸ್ಥಳೀಯ ಭಾಷೆಗಳಿಗಾಗಿ ಭಾಷಾ ಕೃತಕ ಬುದ್ಧಿಮತ್ತೆ ಸಹಕಾರದ ಸಾಧ್ಯತೆಗಳನ್ನು ಪರಿಶೀಲಿಸಿವೆ.
ಭಾಷಿಣಿ ವೇದಿಕೆ 36 ಭಾರತೀಯ ಪಠ್ಯ ಭಾಷೆಗಳು, 23 ಭಾರತೀಯ ಧ್ವನಿ ಭಾಷೆಗಳು ಮತ್ತು 35 ಅಂತರರಾಷ್ಟ್ರೀಯ ಭಾಷೆಗಳಿಗೆ ಬೆಂಬಲ ನೀಡುತ್ತಿದೆ.
ಭಾಷಿಣಿ ಆಧಾರಿತ ಸೇವೆಗಳು 800ಕ್ಕೂ ಹೆಚ್ಚು ಸರ್ಕಾರಿ ಜಾಲತಾಣಗಳಲ್ಲಿ ಬಳಕೆಯಾಗುತ್ತಿದ್ದು, ಒಟ್ಟು ಕೃತಕ ಬುದ್ಧಿಮತ್ತೆ ನಿರ್ವಹಣೆಗಳ ಸಂಖ್ಯೆ 9 ಶತಕೋಟಿ ಮೀರಿದೆ.
9.ಸರ್ಜನ್ ವೈಸ್ ಅಡ್ಮಿರಲ್ ದಿಲೀಪ್ ರಾಘವನ್ ಅವರು ಸಶಸ್ತ್ರ ಪಡೆಗಳ ಆಸ್ಪತ್ರೆ ಸೇವೆಗಳ ಮಹಾನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. 'ದಿಲೀಪ್ ರಾಘವನ್' ಅವರಿಗೆ 2026ರ ವಿಶಿಷ್ಟ ಸೇವಾ ಪದಕ ಪ್ರದಾನ ಮಾಡಲಾಗಿದೆ.
10.ವಿಶ್ವನಾಥನ್ ಆನಂದ್ ಅವರು ಅಂತರರಾಷ್ಟ್ರೀಯ ಚದುರಂಗ ಒಕ್ಕೂಟದ ಹಂಗಾಮಿ ಅಧ್ಯಕ್ಷ ಜವಾಬ್ದಾರಿಯಲ್ಲಿ ಮುಂದುವರಿಯಲಿದ್ದಾರೆ.
3September 3, 2026 381 1