ಯುನೆಸ್ಕೋ ಮನ್ನಣೆ: ತೆಲಂಗಾಣದ ಮುಲುಗು ಜಿಲ್ಲೆಯ ಪಾಲಂಪೇಟ್ ಗ್ರಾಮದಲ್ಲಿರುವ… — 🎯TARGET PSI & KAS🎯 — TG.ME

❗️ಯುನೆಸ್ಕೋ ಮನ್ನಣೆ:
ತೆಲಂಗಾಣದ ಮುಲುಗು ಜಿಲ್ಲೆಯ ಪಾಲಂಪೇಟ್ ಗ್ರಾಮದಲ್ಲಿರುವ ಐತಿಹಾಸಿಕ ರಾಮಪ್ಪ ದೇವಸ್ಥಾನವನ್ನು (ರುದ್ರೇಶ್ವರ ಸ್ವಾಮಿ ಗುಡಿ) ಯುನೆಸ್ಕೋ ವಿಶ್ವ ಪರಂಪರೆ ಸಮಿತಿಯು ಭಾರತದ 39ನೇ ವಿಶ್ವ ಪರಂಪರೆ ತಾಣ ಎಂದು ಘೋಷಿಸಿದೆ.

ರಾಜವಂಶ: ಈ ದೇವಾಲಯವನ್ನು ಕಾಕತೀಯ ರಾಜವಂಶಸ್ಥರ (ಕ್ರಿ.ಶ. 1123-1323) ಆಳ್ವಿಕೆಯ ಕಾಲದಲ್ಲಿ ನಿರ್ಮಿಸಲಾಗಿದೆ.

ಹೆಸರಿನ ವಿಶೇಷತೆ:
ಸಾಮಾನ್ಯವಾಗಿ ದೇವಸ್ಥಾನಗಳಿಗೆ ಅಲ್ಲಿನ ದೇವತೆಗಳ ಹೆಸರಿಡಲಾಗುತ್ತದೆ. ಆದರೆ, ಈ ದೇವಾಲಯವನ್ನು ಕೆತ್ತಿದ ಮುಖ್ಯ ಶಿಲ್ಪಿ ‘ರಾಮಪ್ಪ’ ನ ನೆನಪಿಗಾಗಿ ಇದಕ್ಕೆ ‘ರಾಮಪ್ಪ ದೇವಸ್ಥಾನ’ ಎಂದು ಹೆಸರಿಡಲಾಗಿದೆ. (ಶಿಲ್ಪಿಯ ಹೆಸರನ್ನು ಹೊಂದಿರುವ ಭಾರತದ ಏಕೈಕ ಪ್ರಮುಖ ದೇವಾಲಯ ಇದಾಗಿದೆ)
September 3, 2026 898 7