❗️1931ರ ಜನಗಣತಿಯ ಪ್ರಮುಖಾಂಶಗಳು
ಒಟ್ಟು ಜನಸಂಖ್ಯೆ:
ಬ್ರಿಟಿಷ್ ಭಾರತದ (ಅವಿಭಜಿತ ಭಾರತ) ಒಟ್ಟು ಜನಸಂಖ್ಯೆ 35.05 ಕೋಟಿ ಆಗಿತ್ತು.
ಜಾಗತಿಕ ಜನಸಂಖ್ಯೆ:
ಆ ಸಮಯದಲ್ಲಿ ವಿಶ್ವದ ಅಂದಾಜು ಜನಸಂಖ್ಯೆ 185 ಕೋಟಿ ಇತ್ತು
ಜನಸಾಂದ್ರತೆ:
ಪ್ರತಿ ಚದರ ಕಿಲೋಮೀಟರ್‌ಗೆ ಸರಾಸರಿ 85 ವ್ಯಕ್ತಿಗಳು ಇದ್ದರು.
ಭಾಷಾ ವೈವಿಧ್ಯತೆ:
ಭಾರತದಲ್ಲಿ ಒಟ್ಟು 225 ಉಪಭಾಷೆಗಳು (Dialects) ಇದ್ದವು.
❗️ಜನಸಾಂದ್ರತೆಯ ವಿವರ
• ಅತಿ ಕಡಿಮೆ ಜನಸಾಂದ್ರತೆ:
ಬಲೂಚಿಸ್ತಾನದ ಚಾಗೈ (Chagai) ಪ್ರದೇಶದಲ್ಲಿ ಪ್ರತಿ ಚದರ ಕಿಲೋಮೀಟರ್‌ಗೆ 1 ಕ್ಕಿಂತ ಕಡಿಮೆ ವ್ಯಕ್ತಿಗಳಿದ್ದರು
• ಅತಿ ಹೆಚ್ಚು ಜನಸಾಂದ್ರತೆ:
ಕೊಚ್ಚಿನ್ ಸಂಸ್ಥಾನದ ನೈಋತ್ಯ ಕರಾವಳಿಯಲ್ಲಿ ಪ್ರತಿ ಚದರ ಕಿಲೋಮೀಟರ್‌ಗೆ ಸುಮಾರು 800 ವ್ಯಕ್ತಿಗಳಿದ್ದರು
• ಗಾಂಧಿ-ಇರ್ವಿನ್ ಒಪ್ಪಂದ (ಮಾರ್ಚ್ 5, 1931):
ಈ ಒಪ್ಪಂದದ ಮೂಲಕ ದೇಶದಲ್ಲಿ ನಡೆಯುತ್ತಿದ್ದ ಸವಿನ್ಯ ಕಾನೂನು ಭಂಗ ಚಳವಳಿಯನ್ನು (Civil Disobedience Movement) ತಾತ್ಕಾಲಿಕವಾಗಿ ಹಿಂತೆಗೆದುಕೊಳ್ಳಲಾಯಿತು. ಇದು 1931ರ ಜನಗಣತಿ ಪ್ರಕ್ರಿಯೆಯ ಮೇಲೂ ಪ್ರಭಾವ ಬೀರಿತ್ತು.
• ಗಣತಿ ಆಯುಕ್ತರು (Census Commissioner):
1931ರ ಭಾರತದ ಜನಗಣತಿಯ ನೇತೃತ್ವವನ್ನು ಮತ್ತು ಅದರ 518 ಪುಟಗಳ ವರದಿಯನ್ನು ಸಿದ್ಧಪಡಿಸಿದ ಬ್ರಿಟಿಷ್ ಅಧಿಕಾರಿ ಜಾನ್ ಹೆನ್ರಿ ಹಟ್ಟನ್ (John Henry Hutton). ಇವರು ಪ್ರಸಿದ್ಧ ಮಾನವಶಾಸ್ತ್ರಜ್ಞರೂ (Anthropologist) ಆಗಿದ್ದರು..

5September 1, 2026 865 4